Mon,May20,2024
ಕನ್ನಡ / English

ಎನ್‌ಸಿಬಿ ಅಧಿಕಾರಿಗೆ ಝೆಡ್-ಪ್ಲಸ್ ಭದ್ರತೆ ನೀಡಿದ್ದಕ್ಕೆ ಕೇಂದ್ರ ಸರ್ಕಾರದ ಮೇಲೆ ಶಿವಸೇನೆ ವಾಗ್ದಾಳಿ | ಜನತಾ ನ್ಯೂಸ್

28 Oct 2021
2319

ಮುಂಬೈ : ಡ್ರಗ್ಸ್ ಗೆ ಸಂಭಂದಪಟ್ಟ ಹಾಗೆ ಬಾಲಿವುಡ್ ನ ಪ್ರಭಾವಿ ನಟ ಶಾರುಕ್ ಖಾನ್ ಮಗ ಆರ್ಯನ್ ಖಾನ್ ನನ್ನು ಬಂಧಿಸಿದಕ್ಕಾಗಿ ಜೀವಬೆದರಿಕೆ ಎದುರಿಸುತ್ತಿರುವ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ(ಎನ್‌ಸಿಬಿ)ದ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಯವರಿಗೆ ಝೆಡ್-ಪ್ಲಸ್ ಭದ್ರತೆ ನೀಡಿದ್ದಕ್ಕೆ ಆಡಳಿತರೂಡ ಶಿವಸೇನೆ ಈಗ ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ ಆರಂಭಿಸಿದೆ.

ಕ್ರೂಸ್ ಶಿಪ್ ಡ್ರಗ್ ಪ್ರಕರಣದಲ್ಲಿ ಆರ್ಯನ್ ಖಾನ್ ನನ್ನು ಬಂಧಿಸಿದ ನಂತರ ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆಯವರ ಮೇಲೆ ಮಹಾರಾಷ್ಟ್ರ ಆಡಳಿತರೂಡ ಎನ್‌ಸಿಪಿ ಹಾಗೂ ಶಿವಸೇನೆ ನಿರಂತರ ವೈಯಕ್ತಿಕ ವಾಗ್ದಾಳಿ ನಡೆಸುತ್ತಿರುವ ಬೆನ್ನಲ್ಲೇ ವಾಂಖೆಡೆಯವರಿಗೆ ಜೀವಬೆದರಿಕೆ ಕರೆಗಳು ಬರುತ್ತಿರುವ ಕಾರಣ ಕೇಂದ್ರ ಸರ್ಕಾರ ಎನ್‌ಸಿಬಿ ಅಧಿಕಾರಿಗೆ ಝೆಡ್-ಪ್ಲಸ್ ಭದ್ರತೆ ನೀಡಿದೆ.

ಇದಕ್ಕೆ ಈಗ, "ಅರ್ಹರಲ್ಲದ ಜನರಿಗೆ ಭದ್ರತೆ ನೀಡುವಲ್ಲಿ ಕೇಂದ್ರ ಪಡೆಗಳನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ", ಎಂದು ಆರೋಪಿಸಿ ಮಹಾರಾಷ್ಟ್ರದ ಆಡಳಿತ ಪಕ್ಷ ಶಿವಸೇನೆ ಇಂದು ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿದೆ.

ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋದ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಅವರಿಗೆ ಝಡ್-ಪ್ಲಸ್ ಭದ್ರತೆ ಒದಗಿಸುವ ಕೇಂದ್ರದ ನಿರ್ಧಾರವನ್ನು ಉಲ್ಲೇಖಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಿವಸೇನೆ ಸಂಸದ ಸಂಜಯ್ ರಾವುತ್, ಕೇಂದ್ರವು ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ಹೊಂದಿದ್ದರೆ, ಅವರನ್ನು ಕಾಶ್ಮೀರ ಮತ್ತು ಅರುಣಾಚಲ ಪ್ರದೇಶಕ್ಕೆ ಕಳುಹಿಸಲಿ, ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ.

"ಕೇಂದ್ರವು ಸಾಕಷ್ಟು ಭದ್ರತಾ ಪಡೆಗಳನ್ನು ಹೊಂದಿದೆ ಎಂದು ತೋರುತ್ತಿದೆ, ಜನರಿಗೆ ಈ ರೀತಿಯ ಭದ್ರತೆಯನ್ನು ನೀಡಲಾಗುತ್ತದೆ. ಅವರು ಕಾಶ್ಮೀರ, ಅರುಣಾಚಲಕ್ಕೆ ಪಡೆಗಳನ್ನು ಕಳುಹಿಸಬೇಕು" ಎಂದು ಸಂಜಯ್ ರಾವತ್ ಹೇಳಿದರು, ಮಹಾರಾಷ್ಟ್ರ ಎಲ್ಲರಿಗೂ ಸುರಕ್ಷಿತ ರಾಜ್ಯವಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ಕುಟಿಲ ಕೆಲಸ ಮಾಡುವವರಿಗೆ ಝಡ್ ಪ್ಲಸ್ ಭದ್ರತೆ ನೀಡಲಾಗುತ್ತದೆ, ಎಂದು ಅಕ್ರೋಶ ವ್ಯಕ್ತ ಪಡಿಸಿರುವ ರಾವತ್ ಏನೇ ಆದರೂ ವಿಚಾರಣೆ ನಡೆಸುವ ಮುನ್ಸೂಚನೆ ನೀಡಿದ್ದಾರೆ.

RELATED TOPICS:
English summary :Shiv Sena takes on Center for providing X-plus security to NCB officer

ಪ್ರಧಾನಿ ಮೋದಿ ಅವರ ಮೂರನೇ ಅವಧಿಯ ಆರು ತಿಂಗಳೊಳಗೆ ಪಿಒಕೆ ಭಾರತದ ಭಾಗವಾಗಲಿದೆ - ಸಿಎಂ ಯೋಗಿ
ಪ್ರಧಾನಿ ಮೋದಿ ಅವರ ಮೂರನೇ ಅವಧಿಯ ಆರು ತಿಂಗಳೊಳಗೆ ಪಿಒಕೆ ಭಾರತದ ಭಾಗವಾಗಲಿದೆ - ಸಿಎಂ ಯೋಗಿ
ಸಂಸದ ಪ್ರಜ್ವಲ್‌ ರೇವಣ್ಣ  ಪೆನ್‌ಡ್ರೈವ್‌ ಪ್ರಕರಣ : ಎಲ್ಲಾ ಡಿ.ಕೆ.ಶಿವಕುಮಾರ್‌ ಪ್ಲಾನ್ - ವಕೀಲ ದೇವರಾಜೇಗೌಡ
ಸಂಸದ ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಪ್ರಕರಣ : ಎಲ್ಲಾ ಡಿ.ಕೆ.ಶಿವಕುಮಾರ್‌ ಪ್ಲಾನ್ - ವಕೀಲ ದೇವರಾಜೇಗೌಡ
 ಬೆಂಗಳೂರು ನಗರ ವ್ಯಾಪ್ತಿಯಲ್ಲಿ ರಸ್ತೆಬದಿ ಒಣಗಿರುವ ಮರಗಳು ಹಾಗೂ ರೆಂಬೆ ಕೊಂಬೆಗಳ ಮಾಹಿತಿ ಕೋರಿರುವ ಬಿಬಿಎಂಪಿ
ಬೆಂಗಳೂರು ನಗರ ವ್ಯಾಪ್ತಿಯಲ್ಲಿ ರಸ್ತೆಬದಿ ಒಣಗಿರುವ ಮರಗಳು ಹಾಗೂ ರೆಂಬೆ ಕೊಂಬೆಗಳ ಮಾಹಿತಿ ಕೋರಿರುವ ಬಿಬಿಎಂಪಿ
ಸಿಎಂ ಕೇಜ್ರಿವಾಲ್ ಗೃಹ ಕಚೇರಿಯಲ್ಲಿ ಎಎಪಿ ರಾಜ್ಯಸಭಾ ಸಂಸದೆ ಮೇಲೆ ಹಲ್ಲೆ ಪ್ರಕರಣ : ದೂರು ದಾಖಲಿಸಿದ ಸ್ವಾತಿ ಮಲಿವಾಲ್
ಸಿಎಂ ಕೇಜ್ರಿವಾಲ್ ಗೃಹ ಕಚೇರಿಯಲ್ಲಿ ಎಎಪಿ ರಾಜ್ಯಸಭಾ ಸಂಸದೆ ಮೇಲೆ ಹಲ್ಲೆ ಪ್ರಕರಣ : ದೂರು ದಾಖಲಿಸಿದ ಸ್ವಾತಿ ಮಲಿವಾಲ್
ಚುನಾವಣಾ ಪ್ರಚಾರಕ್ಕೆ ಜಾಮೀನು : ಅರವಿಂದ್ ಕೇಜ್ರಿವಾಲ್ ಅವರಿಗೆ ವಿಶೇಷ ಸವಲತ್ತು ನೀಡಲಾಗಿದೆ - ಕೇಂದ್ರ ಗೃಹ ಸಚಿವ
ಚುನಾವಣಾ ಪ್ರಚಾರಕ್ಕೆ ಜಾಮೀನು : ಅರವಿಂದ್ ಕೇಜ್ರಿವಾಲ್ ಅವರಿಗೆ ವಿಶೇಷ ಸವಲತ್ತು ನೀಡಲಾಗಿದೆ - ಕೇಂದ್ರ ಗೃಹ ಸಚಿವ
ಪಾಕಿಸ್ತಾನವು ಬಳೆಗಳನ್ನು ಧರಿಸದಿದ್ದರೆ, ನಾವು ಅವರಿಗೆ ಬಳೆಗಳನ್ನು ಧರಿಸುವಂತೆ ಮಾಡುತ್ತೇವೆ - ಪ್ರಧಾನಿ ಮೋದಿ
ಪಾಕಿಸ್ತಾನವು ಬಳೆಗಳನ್ನು ಧರಿಸದಿದ್ದರೆ, ನಾವು ಅವರಿಗೆ ಬಳೆಗಳನ್ನು ಧರಿಸುವಂತೆ ಮಾಡುತ್ತೇವೆ - ಪ್ರಧಾನಿ ಮೋದಿ
 ಸರತಿ ಸಾಲಿನಲ್ಲಿ ಬಂದು ಮತ ಚಲಾಯಿಸುವಂತೆ ಕೇಳಿದ ಮತದಾರನಿಗೆ ಕಪಾಳಮೋಕ್ಷ ಮಾಡಿದ ಆಂದ್ರಪ್ರದೇಶದ ಶಾಸಕ
ಸರತಿ ಸಾಲಿನಲ್ಲಿ ಬಂದು ಮತ ಚಲಾಯಿಸುವಂತೆ ಕೇಳಿದ ಮತದಾರನಿಗೆ ಕಪಾಳಮೋಕ್ಷ ಮಾಡಿದ ಆಂದ್ರಪ್ರದೇಶದ ಶಾಸಕ
ದೆಹಲಿ ಸಿಎಂ ನಿವಾಸದಲ್ಲಿ ಆಪ್ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಮೇಲೆ ಹಲ್ಲೆ ಪ್ರಕರಣ : ಭಾರಿ ಚರ್ಚೆ
ದೆಹಲಿ ಸಿಎಂ ನಿವಾಸದಲ್ಲಿ ಆಪ್ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಮೇಲೆ ಹಲ್ಲೆ ಪ್ರಕರಣ : ಭಾರಿ ಚರ್ಚೆ
ಅದಾನಿ, ಅಂಬಾನಿ ಹಣದ ಬ್ಯಾಗ್ ನಿರೀಕ್ಷೆ ಬಗ್ಗೆ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಹೇಳಿಕೆ- ಬಿಜೆಪಿ ವಾಗ್ದಾಳಿ
ಅದಾನಿ, ಅಂಬಾನಿ ಹಣದ ಬ್ಯಾಗ್ ನಿರೀಕ್ಷೆ ಬಗ್ಗೆ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಹೇಳಿಕೆ- ಬಿಜೆಪಿ ವಾಗ್ದಾಳಿ
ಪಾಕ್ ಆಕ್ರಮಿತ ಜಮ್ಮುಕಾಶ್ಮೀರದಲ್ಲಿ ನಾಗರಿಕ ಯುದ್ಧ ಪರಿಸ್ಥಿತಿ ಉದ್ಭವ : ಗಾಳಿಯಲ್ಲಿ ಗುಂಡು, ಪೊಲೀಸರ ಪ್ರತಿಭಟನಾಕಾರರ ಘರ್ಷಣೆ
ಪಾಕ್ ಆಕ್ರಮಿತ ಜಮ್ಮುಕಾಶ್ಮೀರದಲ್ಲಿ ನಾಗರಿಕ ಯುದ್ಧ ಪರಿಸ್ಥಿತಿ ಉದ್ಭವ : ಗಾಳಿಯಲ್ಲಿ ಗುಂಡು, ಪೊಲೀಸರ ಪ್ರತಿಭಟನಾಕಾರರ ಘರ್ಷಣೆ
ಪ್ರಧಾನಿ ಮೋದಿ ಏನು ಹೇಳಿದರೂ ತೂಕವಿಲ್ಲ - ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ
ಪ್ರಧಾನಿ ಮೋದಿ ಏನು ಹೇಳಿದರೂ ತೂಕವಿಲ್ಲ - ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ
ಚುನಾವಣಾ ಪ್ರಚಾರಕ್ಕಾಗಿ ಅರವಿಂದ್ ಕೇಜ್ರಿವಾಲ್ ಮಧ್ಯಂತರ ಜಾಮೀನು ನೀಡಿದ ಸುಪ್ರೀಂ
ಚುನಾವಣಾ ಪ್ರಚಾರಕ್ಕಾಗಿ ಅರವಿಂದ್ ಕೇಜ್ರಿವಾಲ್ ಮಧ್ಯಂತರ ಜಾಮೀನು ನೀಡಿದ ಸುಪ್ರೀಂ

ನ್ಯೂಸ್ MORE NEWS...